ಪರಾಕ್ರಮಿ ದೇವರು, ನಿತ್ಯನಾದ ತಂದೆ, ಈ ಭೂಮಿಗೆ ಬಂದು ಶಿಲುಬೆಗೇರಿಸಲ್ಪಟ್ಟರು, ಅಸಂಖ್ಯಾತ ಜನರಿಂದ ಅಪಹಾಸ್ಯ, ತಿರಸ್ಕಾರ ಮತ್ತು ಹಿಂಸೆಯನ್ನು ಸಹಿಸಿಕೊಂಡರು. ಎಷ್ಟಾದರೂ, ಅವರು ತನ್ನ ನಿಜವಾದ ಜನರನ್ನು ಕಂಡುಕೊಳ್ಳಲು, ಅವರ ಎಲ್ಲಾ ಪಾಪಗಳನ್ನು ಪರಿಹಾರ ಮಾಡಲು ಮತ್ತು ಅವರನ್ನು ರಕ್ಷಿಸಲು ಮೌನವಾಗಿ ಇದನ್ನೆಲ್ಲಾ ಸಹಿಸಿಕೊಂಡರು.
ಪರಲೋಕ ಮಕ್ಕಳನ್ನು ರಕ್ಷಿಸುವ ಪ್ರಕ್ರಿಯೆಯಲ್ಲಿ, ಯೇಸು ತನ್ನ ಮೊದಲನೆಯ ಬರುವಿಕೆಯಲ್ಲಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ತನ್ನ ಎರಡನೆಯ ಆಗಮನದಲ್ಲಿ ಮತ್ತು ಪರಲೋಕ ತಾಯಿ ಯೆರೂಸಲೇಮ್ ಎಲ್ಲರೂ ಶರೀರದಲ್ಲಿ ಈ ಭೂಮಿಗೆ ಬಂದರು. ಪ್ರವಾದನೆಯ ಪ್ರಕಾರ, ಈ ಮಾರ್ಗವು ಅನಿವಾರ್ಯವಾಗಿ ದುಃಖದ ದಿನಗಳನ್ನು ಒಳಗೊಂಡಿರುತ್ತದೆ, ನಂತರ ಮಹಿಮೆಯನ್ನು ಪಡೆದಾಗ ಸಂತೋಷದ ದಿನಗಳು ಬರುತ್ತವೆ. ಈ ವಾಗ್ದಾನಕ್ಕೆ ಅನುಗುಣವಾಗಿ, ಈಗ ಚರ್ಚ್ ಆಫ್ ಗಾಡ್’ಅನ್ನು ಮುನ್ನಡೆಸುತ್ತಿರುವ ತಾಯಿ ದೇವರ ಮಹಿಮೆಯು ಲೋಕದಾದ್ಯಂತ ಪ್ರಕಟಗೊಳ್ಳುತ್ತಿದೆ.
ಯೇಸು ಅವರನ್ನು - ತಂದೆಯ ಕಡೆಯಿಂದ ಅನೇಕ ಒಳ್ಳೇ ಕ್ರಿಯೆಗಳನ್ನು ನಿಮಗೆ ತೋರಿಸಿದೆನು; ಅವುಗಳಲ್ಲಿ ಯಾವ ಕ್ರಿಯೆಯ ದೆಸೆಯಿಂದ ನನ್ನ ಮೇಲೆ ಕಲ್ಲೆಸೆಯುತ್ತೀರಿ ಎಂದು ಕೇಳಿದ್ದಕ್ಕೆ ಯೆಹೂದ್ಯರು - ನಾವು ನಿನ್ನ ಮೇಲೆ ಕಲ್ಲೆಸೆಯುವದು ಒಳ್ಳೇ ಕಾರ್ಯದ ದೆಸೆಯಿಂದಲ್ಲ, ದೇವದೂಷಣೆಯ ದೆಸೆಯಿಂದಲೂ ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವದರ ದೆಸೆಯಿಂದಲೂ ನಿನ್ನ ಮೇಲೆ ಕಲ್ಲೆಸೆಯುತ್ತೇವೆ ಅಂದರು. ಯೋಹಾನನು 10:32-33
ನಿನ್ನ ಸೂರ್ಯನು ಇನ್ನು ಮುಣುಗನು, ನಿನ್ನ ಚಂದ್ರನು ತೊಲಗನು; ಯೆಹೋವನೇ ನಿನಗೆ ನಿತ್ಯಪ್ರಕಾಶವಾಗಿರುವನು, ನೀನು ದುಃಖಿಸುವ ದಿನಗಳು ಕೊನೆಗಾಣುವವು. ಯೆಶಾಯನು 60:20
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ 
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ